Job Description: * ಅಸ್ಸಾಂ ಮುಖ್ಯಮಂತ್ರಿಯಾಗಿರುವ ಸರ್ವಾನಂದ ಸೋನೊವಾಲ್ ನೇತೃತ್ವದ ಸಚಿವ ಸಂಪುಟ ಸಭೆಯು ಭಾರತದ ಹೆಮ್ಮೆಯ ವೇಗದ ಓಟಗಾರ್ತಿ ಮತ್ತು ಧಿಂಗ್ ಎಕ್ಸ್ಪ್ರೆಸ್ ಎಂದೇ ಪ್ರಖ್ಯಾತಿ ಪಡೆದಿರುವ ಹಿಮಾದಾಸ್ ಅವರನ್ನು ಅಸ್ಸಾಂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ಅಧೀಕ್ಷಕಿ (DYSP) ಆಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. * ಇತ್ತೀಚಿಗೆ ಅಸ್ಸಾಂ ಸರ್ಕಾರವು ಸಮಗ್ರ ಕ್ರೀಡಾನೀತಿಯ ತಿದ್ದುಪಡಿ ಮಾಡುವ ನಿರ್ಧಾರವನ್ನು ಹೊಂದಿದೆ ಎಂದು ಮುಖ್ಯಮಂತ್ರಿಯಾಗಿರುವ ಸರ್ವಾನಂದ ಸೋನೊವಾಲ್ ನೇತೃತ್ವದ ಸಚಿವ ಸಂಪುಟ ಸಭೆ ಅಂಗೀಕರಿಸಿದ್ದು, ಇದರಿಂದ ಕ್ರೀಡಾಪಟುಗಳನ್ನು ಕ್ಲಾಸ್-1 ಹಾಗೂ ಕ್ಲಾಸ್-2 ಅಧಿಕಾರಿಗಳಾಗಿ ಪೊಲೀಸ್, ಅಬಕಾರಿ, ಸಾರಿಗೆ ಹೀಗೆ ಹಲವು ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಸ್ಸಾಂ ಸರ್ಕಾರದ ವಕ್ತಾರ ಹಾಗೂ ಕೈಗಾರಿಕಾ ಸಚಿವ ಚಂದ್ರಮೋಹನ ಪಟೋವರಿ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.