Job Description: * ಪ್ರಸ್ತುತ ಭಾರತ ದೇಶದಲ್ಲಿ 2019 ರಲ್ಲಿ ಅತಿ ಹೆಚ್ಚು ದೇಶ ದ್ರೋಹ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ ಎಂದು ರಾಜ್ಯ ಸಭೆಗೆ ಕೇಂದ್ರ ಸರ್ಕಾರ ವರದಿಯನ್ನು ನೀಡಿದೆ. ಈ ವರದಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟಾರೆ 2019 ರಲ್ಲಿ 22 ಪ್ರಕರಣಗಳು ದಾಖಲಾಗಿವೆ ಅದರಲ್ಲಿ 18 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. * ಪ್ರಸ್ತುತ 2019 ರಲ್ಲಿ ದೇಶದ ವಿವಿಧ ಕಡೆಗಳಲ್ಲಿ 93 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ ಅದರಲ್ಲಿ 96 ದೇಶದ್ರೋಹಿ ಜನರನ್ನು ಬಂಧಿಸಲಾಗಿದೆ, ಎಂದು ರಾಜ್ಯ ಗೃಹ ಖಾತೆಯ ಸಚಿವ ಜಿ.ಕೃಷ್ಣ ರೆಡ್ಡಿ ಯವರು ದೇಶದ್ರೋಹ ಪ್ರಕರಣಗಳ ಮಾಹಿತಿಯನ್ನು ರಾಜ್ಯಸಭೆಗೆ ತಿಳಿಸಿದ್ದಾರೆ. ದೇಶದ್ರೋಹ ಪ್ರಕರಣ ದಾಖಲಾಗಿರುವ ರಾಜ್ಯಗಳು: - ಕರ್ನಾಟಕ 22 ಪ್ರಕರಣಗಳು - ಅಸ್ಸಾಂನಲ್ಲಿ 17 ಪ್ರಕರಣಗಳು - ಜಮ್ಮುಕಾಶ್ಮೀರದಲ್ಲಿ 11 ಪ್ರಕರಣಗಳು - ಉತ್ತರ ಪ್ರದೇಶದಲ್ಲಿ 10 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.