Job Description: * ಎಲ್ ಪಿಜಿ(LPG) ಗ್ಯಾಸ್ ಸಿಲಿಂಡರ್'ಗಳಿಗೆ ಕೊನೆಯ ದಿನಾಂಕ ಇರೋದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್(IOC) ಸ್ಪಷ್ಟನೆಯನ್ನು ನೀಡಿದೆ. * ಪ್ರತಿ ವರ್ಷ ಗ್ಯಾಸ್ ಸಿಲಿಂಡರ್'ಗಳ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಗ್ರಾಹಕರಲ್ಲಿ ಆತಂಕವನ್ನು ಸೃಷ್ಟಿಸಿದ್ದವು, ಆದರೆ ಇದೀಗ ತೈಲ ಕಂಪನಿಗಳು ಸಿಲಿಂಡರ್ ಗಳಿಗೆ ಕೊನೆಯ ದಿನಾಂಕ ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಗ್ಯಾಸ್ ಸಿಲಿಂಡರ್'ಗಳಿಗೆ ಕಡ್ಡಾಯ ಪರೀಕ್ಷೆಗಳ ದಿನಾಂಕವನ್ನು ಮಾತ್ರ ಮುದ್ರಿಸಲಾಗುತ್ತದೆ ಎಂದು IOC ತಿಳಿಸಿದೆ. - ಗ್ಯಾಸ್ ಸಿಲಿಂಡರ್'ಗಳ ಮಾಹಿತಿ: * ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್'ಗಳು 15 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ, ಹಾಗೂ ಅವುಗಳಿಗೆ ಎರಡು ಬಾರಿ ಕಡ್ಡಾಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮಾಹಿತಿಯನ್ನು ನೀಡಿದೆ. * ಸಿಲಿಂಡರ್'ಗಳನ್ನೂ ಹೈಡ್ರೋ ಟೆಸ್ಟ್ ಮತ್ತು ನ್ಯೂಮ್ಯಾಟಿಕ್ ಟೆಸ್ಟ್ ನೊಂದಿಗೆ ಪರೀಕ್ಷೆ ಮಾಡಲಾಗುತ್ತದೆ, ಈ ಎರಡೂ ಪರೀಕ್ಷೆಗಳಲ್ಲಿ ಸಿಲಿಂಡರ್ ವಿಫಲವಾದರೆ ಅಂತಹ ಗ್ಯಾಸ್ ಸಿಲಿಂಡರ್'ಗಳನ್ನೂ ಬಳಕೆಗೆ ರದ್ದುಮಾಡಲಾಗುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮಾಹಿತಿಯನ್ನು ನೀಡಿದೆ.