Job Description: * ಲಡಾಖ್ನಲ್ಲಿ ಭಾರತದ ಪ್ರಪ್ರಥಮ ಭೂಶಾಖ ಕ್ಷೇತ್ರಾಭಿವೃದ್ಧಿ ಯೋಜನೆಯನ್ನು ಆರಂಭಿಸಲು ಐತಿಹಾಸಿಕ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಲಡಾಖ್ನ ಉಪರಾಜ್ಯಪಾಲ ಆರ್.ಕೆ.ಮಾಥೂರ್'ರವರು ತಿಳಿಸಿದ್ದಾರೆ. * ಇತ್ತೀಚಿಗೆ ಲಡಾಖ್ನಲ್ಲಿ ಮೊಟ್ಟ ಮೊದಲ ಅಭಿವೃದ್ಧಿ ಸಮ್ಮೇಳನ ನಡೆದಿದ್ದು, ಈ ಸಮ್ಮೇಳನದಲ್ಲಿ ಲಡಾಖ್ನ ಅಭಿವೃದ್ಧಿ ಕಾರ್ಯಗಳಿಗಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶವು 'ಲಡಾಖ್ ಸ್ವಾಯತ್ತ ಪರ್ವತೀಯ ವಿಕಾಸ ಪರಿಷದ್' ಮತ್ತು 'ಒಎನ್ಜಿಸಿ ಎನರ್ಜಿ ಸೆಂಟರ್'ಗಳ ನಡುವೆ ಈ ಒಪ್ಪಂದ ಮಾಡಿಕೊಂಡಿರುವುದಾಗಿ ಉಪರಾಜ್ಯಪಾಲ ಆರ್.ಕೆ.ಮಾಥೂರ್ ರವರು ಮಾಹಿತಿಯನ್ನು ನೀಡಿದ್ದಾರೆ. * ಏನಿದು ಭೂಶಾಖ ಕ್ಷೇತ್ರಾಭಿವೃದ್ಧಿ ಯೋಜನೆ? - ಈ ಯೋಜನೆಯ ಒಪ್ಪಂದದಿಂದಾಗಿ ಇಲ್ಲಿ ಲಭ್ಯವಿರುವ ಬಿಸಿನೀರಿನ ಬುಗ್ಗೆಗಳಿಂದ ಮನೆಗಳನ್ನು ಬೆಚ್ಚಗಿರಿಸಲು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಬಿಸಿನೀರಿನ ಈಜುಕೊಳಗಳನ್ನು ಸ್ಥಾಪಿಸಲು - ಲಡಾಖ್ನ ಪ್ರದೇಶಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ