Job Description: * ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿಹಿಮನದಿಯಿಂದ ಸ್ಫೋಟ ಉಂಟಾಗಿದೆ. ಈ ಪ್ರವಾಹದಿಂದಾಗಿ 2 ಜಲವಿದ್ಯುತ್ ಘಟಕಗಳಿಗೆ ಹಾನಿಯಾಗಿದೆ, ಹಲವು ಜನರು ಸಾವನ್ನಪ್ಪಿದ್ದಾರೆ ಹಾಗೂ 125ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ, ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಹಾಗೂ NDRF ಪಡೆಯಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. * ಈ ಋಷಿಗಂಗಾ ಹಿಮನದಿಯ ಜೋಶಿಮಠದ ಪೂರ್ವದಿಕ್ಕಿನಲ್ಲಿ ಇರುವ ನಂದಾದೇವಿ ಪರ್ವತದಲ್ಲಿದೆ ಋಷಿಗಂಗಾ ಹಿಮನದಿಯ ಮಂಜುಗಡ್ಡೆಯು ನೀರ್ಗಲ್ಲು ಮುರಿದುಬಿದ್ದ ಸ್ಫೋಟ ಉಂಟಾಗಿದೆ. * ಈ ಹಿಮನದಿಯ ಪ್ರವಾಹದಿಂದ ರೈನಿ ಎಂಬ ಪ್ರದೇಶದಲ್ಲಿರುವ ಋಷಿಗಂಗಾ ಜಲವಿದ್ಯುತ್ ಯೋಜನೆಯ ಹಾಗೂ ತಪೋವನದಲ್ಲಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯ ಅಣೆಕಟ್ಟೆ ಕೂಡ ಈ ಪ್ರವಾಹದಲ್ಲಿ ಕೊಚ್ಚಿಹೋಗಿವೆ. * ಉತ್ತರಾಖಂಡದಲ್ಲಿ ಈ ಮೊದಲು 2013ರಲ್ಲಿ ಮೇಘಸ್ಫೋಟ ಸಂಭವಿಸಿತ್ತು, ಇದರ ಪರಿಣಾಮವಾಗಿ ಪ್ರವಾಹ ಉಂಟಾಗಿ 5,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.