Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಗಗನಯಾನ-2022, ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಬಾಹ್ಯಾಕಾಶ ಯೋಜನೆಯಲ್ಲಿ 3 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜನೆ ಹೊಂದಿದೆ, ಈ ಗಗನಯಾತ್ರಿಗಳು 5 ರಿಂದ 7 ದಿನ ಬಾಹ್ಯಾಕಾಶದಲ್ಲಿ ಇರಲಿದ್ದಾರೆ ಎಂದು ಇಸ್ರೊ ಮಾಹಿತಿಯನ್ನು ನೀಡಿದೆ. ಈ ಗಗನಯಾತ್ರಿಗಳಿಗೆ ಸೇವಿಸಲು ಬೇಕಾಗಿರುವ ಆಹಾರ ಪದಾರ್ಥಗಳನ್ನು ಕರ್ನಾಟಕ ರಾಜ್ಯದ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (DFRL)ದಲ್ಲಿ ತಯಾರಿಸಲಾಗುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ.