Job Description: * ತಮಿಳುನಾಡು ರಾಜ್ಯದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ಆಧಾರಿತ ಆನ್ ಲೈನ್ ಜೂಜಿಗೆ ನಿಷೇದ ಕಾಯ್ದೆ ಜಾರಿ, ತಮಿಳುನಾಡು ಸರ್ಕಾರದ ವಿಧಾನಸಭೆ ಅಧಿವೇಶನದಲ್ಲಿ ಈ ಕಾಯ್ದೆಯ ತಿದ್ದುಪಡಿಯನ್ನು ತಮಿಳುನಾಡು ಡಿಸಿಎಂ ಪನ್ನೀರ್ ಸೆಲ್ವಂ ಮಂಡಿಸಿದ್ದಾರೆ, ಆದರೆ ಈ ಕಾಯ್ದೆಯಿಂದ ಲಾಟರಿಯನ್ನು ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ. * ಈ ಕಾಯ್ದೆ ಅನ್ವಯ ಆನ್ ಲೈನ್ ಜೂಜಿನಲ್ಲಿ ಭಾಗಿಯಾದವರಿಗೆ 5000 ರೂ. ದಂಡ ಹಾಗೂ 6ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು, ಅಲ್ಲದೆ ಆನ್ ಲೈನ್ ಜೂಜಿನ ಗೇಮ್ ಆಯೋಜಿಸುವವರಿಗೆ 10,000 ರೂ. ದಂಡ ಹಾಗೂ 2ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಪಡಿಸಲಾಗುವದು ಎಂದು ತಮಿಳುನಾಡು ಡಿಸಿಎಂ ತಿಳಿಸಿದ್ದಾರೆ.