Job Description: * ಬಿಹಾರ ಸರ್ಕಾರವು ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು ಹಾಗೂ ವಿದ್ಯಾಭ್ಯಾಸಕ್ಕಾಗಿ ನೆರವು ನೀಡುವ "ಕನ್ಯಾ ಉತ್ತಮ ಯೋಜನೆ" ಅಡಿಯಲ್ಲಿ ಪಿಯುಸಿ ಮತ್ತು ಡಿಗ್ರಿ ಉತ್ತೀರ್ಣ ಹೊಂದಿದ ಹೆಣ್ಣುಮಕ್ಕಳಿಗಾಗಿ ಸಹಾಯ ಧನ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ. * ಪಿಯುಸಿ(PUC) ಉತ್ತೀರ್ಣವಾದ ಅವಿವಾಹಿತ ಹೆಣ್ಣು ಮಕ್ಕಳಿಗೆ 25 ಸಾವಿರ ರೂ. ನೀಡಲಾಗುವದು ಮತ್ತು ಪದವಿ(ಡಿಗ್ರಿ) ಮುಗಿಸಿದ ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಬಿಹಾರ ಸರ್ಕಾರ ತಿಳಿಸಿದೆ. * ಬಿಹಾರ ರಾಜ್ಯದಲ್ಲಿ ಫೆಬ್ರವರಿ 01 ರಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಅದರಲ್ಲಿ ಉತ್ತೀರ್ಣ ಹೊಂದಿದ ಹೆಣ್ಣು ಮಕ್ಕಳಿಗೆ ತಲಾ 25 ಸಾವಿರ ರೂ. ಗಳನ್ನು ನೀಡಲಾಗುತ್ತದೆ ಎಂದು ಬಿಹಾರ ರಾಜ್ಯ ಸರ್ಕಾರ ಮಾಹಿತಿಯನ್ನು ನೀಡಿದೆ.