Job Description: * ಕರ್ನಾಟಕ ರಾಜ್ಯದ ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ ಡಿಜಿ & ಐಜಿಪಿಯಾದ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ, ನಗರ ಪೊಲೀಸ್ ಆಯುಕ್ತರು, ಎಲ್ಲಾ ವಲಯಗಳ IGP ಮತ್ತು ಎಲ್ಲಾ SPಗಳಿಗೆ ಈ ಸುತ್ತೋಲೆಯ ಮಾಹಿತಿಯನ್ನು ನೀಡಿದ್ದಾರೆ. * ಈ ಮೊದಲು ಪೊಲೀಸ್ ಸಿಬ್ಬಂದಿಗಳು ವಾರದ ರಜೆಯನ್ನು ನಮ್ಮ ಮೇಲಾಧಿಕಾರಿಗಳು ನೀಡುತ್ತಿಲ್ಲ ಎಂದು DG & IGP ಪ್ರವೀಣ್ ಸೂದ್ ರವರಿಗೆ ಪತ್ರದ ಮೂಲಕ ತಿಳಿಸಿದ್ದರು. ಈ ವರದಿಯನ್ನು ಪರಿಗಣಿಸಿದ ಪ್ರವೀಣ್ ಸೂದ್ ಅವರು ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ವಾರದ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ವಲಯ IGP ಮತ್ತು ಜಿಲ್ಲಾ SPಗಳಿಗೆ ಕಟ್ಟುನಿಟ್ಟಾಗಿ ಸೂಚನೆ ಮೂಲಕ ತಿಳಿಸಿದ್ದಾರೆ.