Job Description: * ಇತ್ತೀಚಿಗೆ ಪಕ್ಷಿ ಪ್ರಿಯ ಸ್ವಯಂಸೇವಕರು ಮತ್ತು ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಜೊತೆಗೂಡಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 4 ದಿನಗಳ ಕಾಲ ಪಕ್ಷಿ ಸಮೀಕ್ಷೆಯನ್ನು ನಡೆಸಿದರು. ಈ ಪಕ್ಷಿ ಸಮೀಕ್ಷೆಯಲ್ಲಿ ಒಟ್ಟು 270 ಪ್ರಬೇಧಗಳನ್ನು ಗುರುತಿಸಲಾಗಿದೆ, ಅದರಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. 6 ಹೊಸ ಜಾತಿಯ ಪಕ್ಷಿಗಳು ವಿವರ ಇಂತಿದೆ. * ಬ್ಲಾಕ್ ರೆಡ್ ಸ್ಟಾರ್ಟ್ ಪಕ್ಷಿ. * ಗ್ರೀನಿಷ್ ವಾರ್ಬ್ಲರ್ ಪಕ್ಷಿ. * ಗ್ರೇಟರ್ ಸ್ಪಾಟೆಡ್ ಈಗಲ್ ಪಕ್ಷಿ. * ಸ್ಪಾಟ್ ಬೆಲ್ಲಿಡ್ ಈಗಲ್ ಔಲ್ ಪಕ್ಷಿ. * ನೀಲಗಿರಿ ಫ್ಲವರ್ ಪಿಕ್ಕರ್ ಪಕ್ಷಿ. * ಮಾಂಟಾಗೂ ಹ್ಯಾರಿಯರ್ ಪಕ್ಷಿ. ಈ ಹೊಸಬಗೆಯ ಪಕ್ಷಿಗಳನ್ನು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪತ್ತೆಹಚ್ಚಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.