Job Description: * ಇತ್ತೀಚಿಗೆ ಅಮೆರಿಕದ ಅಟ್ಲಾಂಟದಲ್ಲಿ ನಡೆದ ಚಲನಚಿತ್ರೋತ್ಸವದ ಸಮಾರಂಭದಲ್ಲಿ, ಕನ್ನಡದ 'ಅಮೃತಮತಿ'ಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿಯನ್ನು, ಕನ್ನಡ ನಟಿಯಾದ ಹರಿಪ್ರಿಯಾ ಅವರಿಗೆ ಅಮೆರಿಕದ ಅಟ್ಲಾಂಟ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಯಿತು. * ಕನ್ನಡದ ಈ ಅಮೃತಮತಿ ಚಿತ್ರವನ್ನು ಸಾಹಿತಿ, ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪರವರು ನಿರ್ದೇಶಿಸಿದ್ದಾರೆ, ಮತ್ತು ಇದರಲ್ಲಿ ಹರಿಪ್ರಿಯಾ ಹಾಗೂ ಕಿಶೋರ್ ಅವರು ಮುಖ್ಯಭೂಮಿಕೆ ನಟಿಸಿದ್ದರು. * ಇದು 13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತೆ ಕತೆಯನ್ನು ಆಧಾರಿಸಿರುವ ಚಲನಚಿತ್ರವಾಗಿರುವುದು ವಿಶೇಷ.