Job Description: * ಇತ್ತೀಚಿಗೆ ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆಯು ಇದೀಗ ವಿಶ್ವದ ಅತ್ಯಂತ ಬಲಿಷ್ಠ ಬ್ರ್ಯಾಂಡ್'ಗಳ ಪಟ್ಟಿ ಬಿಡುಗಡೆ ಮಾಡಿದೆ, ಈ ಪಟ್ಟಿಯಲ್ಲಿ ಪ್ರಸ್ತುತ ರಿಲಯನ್ಸ್ ಜಿಯೊ ವಿಶ್ವದ ಐದನೆಯ ಅತ್ಯಂತ ಬಲಿಷ್ಠ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಪ್ರಥಮ ಸ್ಥಾನದಲ್ಲಿ 'ವಿಚ್ಯಾಟ್' ಬ್ರ್ಯಾಂಡ್ ಇದೆ ಎಂದು ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆಯು ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಭಾರತದ ಈ ಜಿಯೊ ಕಂಪನಿಯು ಕಡಿಮೆ ಸಮಯದಲ್ಲಿ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಆಗಿ ಬೆಳೆದು ಹೆಸರುವಾಸಿಯಾಗಿದೆ. ಜೊತೆಗೇನೆ ವಿಶ್ವದ ಮೂರನೆಯ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಕಂಪನಿ ಕೂಡ ಜಿಯೊ ಆಗಿದೆ. ಎಂಬ ಮಾಹಿತಿಯನ್ನು ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆಯು ತಿಳಿಸಿದೆ.