Job Description: * ಕೇಂದ್ರ ಸರ್ಕಾರವು 2020-21 ನೇ ಹಣಕಾಸು ವರ್ಷದ ಎರಡನೇ ಕಂತಿನ ಅನುದಾನ ಹಣವನ್ನು ರಾಜ್ಯದ ಗ್ರಾಮೀಣಾ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ. * ಕೇಂದ್ರ ಹಣಕಾಸು ಸಚಿವಾಲಯವು, ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಶಿಫಾರಸಿನ ಅನ್ವಯದ ಮೇಲೆ ಒಟ್ಟು 18 ರಾಜ್ಯಗಳಿಗೆ ಸರಿ ಸುಮಾರು 12,351 ಕೋಟಿ ರೂ. ಅನುದಾನದ ಹಣವನ್ನು ಬಿಡುಗಡೆಗೊಳಿಸಿದೆ. * ಪ್ರಸ್ತುತ ಕರ್ನಾಟಕ ರಾಜ್ಯಕ್ಕೆ 2412 ಕೋಟಿ ರೂ. ಅನುದಾನದ ಹಣವನ್ನು ನೀಡಲಾಗಿದೆ. * ಬಿಡುಗಡೆಗೊಂಡ ಅನುದಾನದ ಹಣವನ್ನು, ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ಜಲ್ಲಾಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.