Job Description: * ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇತ್ತೀಚಿಗೆ ನಡೆಯುವ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ "ಮನೆ ಬಾಗಿಲಿಗೆ ಮಾಸಾಶನ" ಅಭಿಯಾನಕ್ಕೆ ಚಾಲನೆ ನೀಡಿದರು. ಅದರ ಜೊತೆಗೆ 'ನವೋದಯ ಆಯಪ್'ಅನ್ನು ಲೋಕಾರ್ಪಣೆ ಮಾಡಿದರು. * ಭಾರತ ದೇಶದಲ್ಲೇ ಮೊದಲ ಬಾರಿಗೆ ಸಿಎಂ ಬಿಎಸ್ ಯಡಿಯೂರಪ್ಪನವರು ಹೊಸ ಪ್ರಯೋಗವನ್ನು ಮಾಡುತ್ತಿದ್ದು ಈ ಯೋಜನೆಯಿಂದ ಮನೆ ಬಾಗಿಲಿಗೆ ಪೆನ್ಷನ್ ಹಣ ನೀಡುವದಕ್ಕೆ ಮುಂದಾಗಿದೆ. ಈ ಯೋಜನೆಯು 60 ವರ್ಷ ಮೇಲ್ಪಟ್ಟವರಿಗೆ (ಆಧಾರ್ ಕಾರ್ಡ್ ಪರೀಕ್ಷಿಸಿ) ರೆವಿನ್ಯೂ ಇನ್ಸ್ಪೆಕ್ಟರ್ ಅಥವ ವಿಲೇಜ್ ಅಕೌಂಟೆಂಟ್ ಅವರ ಮನೆ ಬಾಗಿಲಿಗೆ ತೆರಳಿ ಹಣವನ್ನು ನೀಡಲಿದ್ದಾರೆ, ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ.