Job Description: * ಭಾರತದ ಉನ್ನತ ನಾಗರೀಕ ಗೌರವವಾದ ಪದ್ಮ ಪ್ರಶಸ್ತಿಗೆ ಒಟ್ಟು 119 ಜನರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕದ ಒಟ್ಟು 5 ಜನ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 5 ಕನ್ನಡಿಗರ ವಿವರ ಇಂತಿವೆ: * ಡಾ. ಬಿ. ಎಮ್. ಹೆಗ್ಡೆ : ಇವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. ಇವರು ಭಾರತದ ಪ್ರಸಿದ್ಧ ವೈದ್ಯ ವಿಜ್ಞಾನ, ಹೃದ್ರೋಗ ತಜ್ಞ, ಶಿಕ್ಷಣತಜ್ಞ, ಹಾಗೂ ಲೇಖಕರಾಗಿದ್ದಾರೆ. * ಡಾ. ಚಂದ್ರಶೇಖರ ಕಂಬಾರ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಈ ಮೊದಲು ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ, ಹಾಗೂ ಇವರು ಕನ್ನಡ ನಾಡು ಕಂಡ ಶೇಷ್ಠಕವಿ, ಕಥೆಗಾರ, ಕಾದಂಬರಿಕಾರ, ಹಾಗೂ ನಾಟಕಕಾರರಾಗಿದ್ದಾರೆ. * ಆರ್. ಎಲ್. ಕಶ್ಯಪ್ ಅವರಿಗೆ ಸಾಹಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಪ್ರೊಫೆಸರ್, ಸಂಶೋಧಕರಾಗಿ ಪ್ರಸಿದ್ದಿ ಪಡೆದಿದ್ದಾರೆ. * ಮಂಜಮ್ಮ ಜೋಗತಿ ಅವರಿಗೆ ಕಲೆ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ಕಲೆಯನ್ನೇ ದೈವವಾಗಿಸಿಕೊಂಡು ಸಮಾಜದಲ್ಲಿ ಮಂಗಳಮುಖಿಯರು ಹೀಗೂ ಜೀವನ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದಾರೆ, ಕರ್ನಾಟಕ ರಾಜ್ಯ ಸರ್ಕಾರವು ಮಾತಾ ಮಂಜಮ್ಮ ಜೋಗತಿ ಅವರ ಕಲೆ ಗುರುತಿಸಿ ಇತ್ತೀಚಿಗೆ ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ನೇಮಕ ಮಾಡಿದೆ. * ಬೆಂಗಳೂರಿನ ಕೆ. ವೈ. ವೆಂಕಟೇಶ್ ಅವರಿಗೆ ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು 2005ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗಳಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.