Job Description: * ಕನ್ನಡ ಸಿನಿ ಪ್ರೇಕ್ಷಕರ ಅಚ್ಚು ಮೆಚ್ಚಿನ ನಾಯಕ ನಟ ಹಾಗೂ ಡಿ ಬಾಸ್ ಎಂದೇ ಖ್ಯಾತಿ ಪಡೆದಿರುವ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕರ್ನಾಟಕ ರಾಜ್ಯದ ಕೃಷಿ ಇಲಾಖೆಯ ರಾಯಭಾರಿಯಾಗಿ ಇತ್ತೀಚಿಗೆ ನೇಮಕಗೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ದರ್ಶನರವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ಹೌಸ್ನ ಕೃಷಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. * ಕೃಷಿ ಇಲಾಖೆಯ ಸಚಿವ ಬಿ.ಸಿ.ಪಾಟೀಲ್ ಅವರು ದರ್ಶನ ಅವರನ್ನು ಭೇಟಿ ನೀಡಿ ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು. ಇದರ ಪ್ರತಿಯುತ್ತರವಾಗಿ ದರ್ಶನ ಅವರು ಒಪ್ಪಿಗೆಯನ್ನು ನೀಡಿದ್ದರು. * ದರ್ಶನ್ ರವರು ಮಂಡ್ಯದ ಬಳಿ ಇರುವ ಗೋಶಾಲೆಯೊಂದಕ್ಕೆ ಮೇವಿನ ಅನುದಾನ ನೀಡಿ ದರ್ಶನ ಅವರು ಪ್ರಾಣಿಗಳು ಬಗ್ಗೆ ಇರುವ ಪ್ರೀತಿಯನ್ನು ತೋರಿದ್ದಾರೆ, ದರ್ಶನ್ ಅವರಿಗೆ ಇರುವ ರೈತರು ಹಾಗೂ ಕೃಷಿ ಚಟುವಟಿಕೆಗಳ ಅಪಾರ ಪ್ರೇಮವನ್ನು ಪರಿಗಣಿಸಿ ರಾಜ್ಯದ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಮಾಡಲಾಗಿದೆ ಎಂದು ಕೃಷಿ ಇಲಾಖಾಯ ತಿಳಿಸಿದೆ.