Job Description: * ಬೆಂಗಳೂರಿನಲ್ಲಿ ಈ ಬಾರಿ ನಡೆಯಲಿರುವ 2021 ನೇ ಸಾಲಿನ 13ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ ಇದೆ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳ ಜಂಟಿ ಪ್ರದರ್ಶನ ನಡೆಯಲಿದೆ. * ಪ್ರಸ್ತುತ ಫೆಬ್ರವರಿ ತಿಂಗಳಲ್ಲಿ ನಡೆಯುವ ಏರ್ ಶೋ ಕಾರ್ಯಕ್ರಮದಲ್ಲಿ ಮಿ-17 ವಿ 5, ಎಚ್ಎಎಲ್, ಎಲ್ಸಿಎಚ್, ಎಲ್ಯುಎಚ್, ಸಿ-17 ಗ್ಲೋಬ್ ಮಾಸ್ಟರ್ , ಎಂಬ್ರೇರ್, ಆಂಟೊನೊವ್ ಆನ್ 32, ಮತ್ತು ಭಾರತೀಯ ವಾಯುಪಡೆಯ ಬೋಯಿಂಗ್ ಚಿನೂಕ್ಸ್ ಮತ್ತು ಎಕೆಎಚ್ 64 ಅಪಾಚೆಗಳ ಮೊದಲ ಬಾರಿಗೆ ಭಾಗವಹಿಸಲಿದ್ದು, ಹೀಗೆ ಹಲವು ವಿಮಾನಗಳು ಪ್ರದರ್ಶನವನ್ನು ತೋರಲಿವೆ. * 2019ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಒಟ್ಟು 61 ವಿಮಾನಗಳು ಭಾಗವಹಿಸಿದ್ದವು, ಪ್ರಸ್ತುತ 2021ರ ಏರ್ ಷೋ ನಲ್ಲಿ ಭಾರತೀಯ 63 ವಿಮಾನಗಳು ಪ್ರದರ್ಶನವನ್ನು ನೀಡಲಿವೆ ಎಂದು ಮಾಹಿತಿ ತಿಳಿದು ಬಂದಿದೆ.