Job Description: * ಚೀನಾ ದೇಶವು ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಇತ್ತೀಚಿಗೆ ಈ ದೇಶವು ಅತಿ ವೇಗದ ರೈಲನ್ನು ಸಿದ್ಧಪಡಿಸಿದೆ, ಈ ರೈಲು ಪ್ರತಿ 1 ಘಂಟೆಗೆ 620 ಕಿಮೀ ವೇಗದಲ್ಲಿ ಚಲಿಸಲಿದೆ ಎಂದು ಚೀನಾ ತಿಳಿಸಿದೆ. * ಈ ಹಿಂದೆ ಚೀನಾ ದೇಶವು ಗಂಟೆಗೆ 600 ಕಿಮೀ ಚಲಿಸುವ ಸಾಮರ್ಥ್ಯವಿರುವ ರೈಲನ್ನು 2016ರಲ್ಲಿ ಮ್ಯಾಗ್ಲೆವ್ ರೈಲನ್ನು ತಯಾರಿಸಿತ್ತು. ಮತ್ತೆ ಇದೀಗ ಚೀನಾ ಗಂಟೆಗೆ 620ಕಿಮೀ ಚಲಿಸುವ ರೈಲನ್ನು ತಯಾರಿಸುತ್ತಿದೆ, ಈ ಅತಿ ವೇಗದ ರೈಲನ್ನು ಸೂಪರ್ ಬುಲೆಟ್ ಮ್ಯಾಗ್ಲೆವ್ ರೈಲು ಎಂದು ಕರೆಯುತ್ತಾರೆ. ಇದೀಗ ಈ ರೈಲು ಅಭಿವೃದ್ಧಿ ಹಂತದಲ್ಲಿದೆ, ಇತ್ತೀಚೆಗೆ ಇದನ್ನು ಚೀನಾದ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡೂನಲ್ಲಿ ಪ್ರದರ್ಶನ ಮಾಡಲಾಯಿತು ಎಂದು ಚೀನಾ ಹೇಳಿದೆ.