Job Description: * ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್ ವಾಹನಗಳಿಗೆ, ಸಚಿವ ಪ್ರಭು ವಿ ಚವ್ಹಾಣ್ ರವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ಚಾಲನೆ ನೀಡಲಾಯಿತು. * ಈ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್ ವಾಹನಗಳನ್ನೂ ರಾಜ್ಯದ 15 ಜಿಲ್ಲೆಗಳಾದ, ಬೀದರ್, ರಾಯಚೂರು, ಕಲಬುರ್ಗಿ, ಧಾರವಾಡ, ಬಿಜಾಪುರ, ಬೆಳಗಾವಿ, ಮಂಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ, ಚಿಕ್ಕಬಳ್ಳಾಪುರ, ತುಮಕೂರು, ಈ ಜಿಲ್ಲೆಗಳಿಗೆ ಶೀಘ್ರದಲ್ಲೇ ವಾಹನಗಳನ್ನು ವಿಸ್ತರಣೆ ಮಾಡಲಾಗುವದು ಎಂದು ಸಚಿವ ಪ್ರಭು ವಿ ಚವ್ಹಾಣ್ ರವರು ತಿಳಿಸಿದರು. * ರೈತರು ತಮ್ಮ ಜಾನುವಾರು ತುರ್ತು ಚಿಕಿತ್ಸೆ ಮತ್ತು ಸೇವೆಯ ಮಾಹಿತಿಯನ್ನು ಪಡೆಯಲು ಸಹಾಯವಾಣಿ 1962 ಸಂಪರ್ಕಿಸಲು ಇದೆ ವೇಳೆ ಕರೆ ನೀಡಲಾಯಿತು.