Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು 'ರಕ್ಷಿತಾ' ಎಂಬ ಯೋಜನೆಯ ಮೂಲಕ '350CC' ಸಾಮರ್ಥ್ಯದ ಒಟ್ಟು 21 ರಾಯಲ್ ಎನ್ಫಿಲ್ಡ್ ಬೈಕ್ ಆಂಬುಲೆನ್ಸ್ಗಳನ್ನು ಅಭಿವೃದ್ಧಿಪಡಿಸಿದೆ. * ಈ ಬೈಕ್ ಆಂಬುಲೆನ್ಸ್ಗಳನ್ನು ತುರ್ತು ಸೇವೆಗಳಿಗಾಗಿ ಭಾರತೀಯ ಸೇನೆಯ ಒಂದು ಅಂಗವಾಗಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ(CRPF)ಗೆ ಡಿಆರ್ಡಿಒ ಗೆ ನೀಡಿದೆ. * ಈ ಬೈಕ್ ಆಂಬುಲೆನ್ಸ್ಗಳನ್ನು ಅಣು ವೈದ್ಯಕೀಯ ಮತ್ತು ವಿಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಉಗ್ರರು ನೆಲೆಸಿರುವ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾದಾಗ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲು ಈ ಬೈಕ್ ಆಂಬುಲೆನ್ಸ್ಗಳನ್ನು ಬಳಸಲಾಗುತ್ತದೆ ಎಂದು ಸಿಆರ್ಪಿಎಫ್ ಮುಖ್ಯಸ್ಥ ಎ.ಪಿ. ಮಹೇಶ್ವರಿ ಮಾಹಿತಿಯನ್ನು ನೀಡಿದ್ದಾರೆ.