Job Description: * ಸಾಫ್ಟ್ವೇರ್ ಮಾಂತ್ರಿಕ ಎಂದೇ ಪ್ರಖ್ಯಾತಿ ಪಡೆದಿರುವ ಹಾಗೂ ಮೈಕ್ರೋಸಾಫ್ಟ ಸ್ಥಾಪಕರಾಗಿರುವ ಬಿಲ್ಗೇಟ್ಸ್ ರವರು ಅಮೆರಿಕದ ಅತೀ ಹೆಚ್ಚು ಕೃಷಿ ಭೂಮಿಯನ್ನು ಹೊಂದುವ ಮೂಲಕ ಅಮೆರಿಕಾದ ಅತಿ ದೊಡ್ಡ ರೈತ ಎನಿಸಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕದ ರಾಜ್ಯಗಳಲ್ಲಿನ 2.42 ಲಕ್ಷ ಎಕರೆ ರೈತರ ಭೂಮಿಯನ್ನು ಇವರು ಖರೀದಿ ಮಾಡಿದ್ದಾರೆ. * ಬಿಲ್ಗೇಟ್ಸ್ ರವರು ಅಮೆರಿಕದಲ್ಲಿನ ಲೂಸಿಯಾನಾದಲ್ಲಿ 69 ಸಾವಿರ ಎಕರೆ, ಅರ್ಕಾನ್ಸಸ್ನಲ್ಲಿ 48 ಸಾವಿರ ಎಕರೆ, ಅರಿಜೋನಾ ರಾಜ್ಯದಲ್ಲಿ 25 ಸಾವಿರ ಎಕರೆಯಷ್ಟು ರೈತರ ಜಮೀನನ್ನು ಬಿಲ್ಗೇಟ್ಸ್ ರವರು ಖರೀದಿ ಮಾಡಿದ್ದು, ಈ ಕೃಷಿ ಭೂಮಿಯಲ್ಲಿ ಏನು ಮಾಡಲಿದ್ದಾರೆ ಎಂದು ಮಾಹಿತಿಯನ್ನು ಬಿಲ್ಗೇಟ್ಸ್ ರವರು ನೀಡಿಲ್ಲ.