Job Description: * ಭಾರತೀಯ ಯೋಧರ ಶೌರ್ಯ, ಪರಾಕ್ರಮ ಹಾಗೂ ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಮತ್ತು ಈಗಿನ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮತ್ತು ಅವರ ಸೇವೆಯ ಸವಿ ನೆನಪಿಗಾಗಿ ಪ್ರತಿ ವರ್ಷ ಜನೆವರಿ 15 ರಂದು 'ರಾಷ್ಟ್ರೀಯ ಸೇನಾ ದಿನ'ವನ್ನು ಆಚರಣೆ ಮಾಡುತ್ತ ಬರಲಾಗುತ್ತಿದೆ. * 1948ರ ಜನವರಿ 15ರಂದು ಭಾರತ ದೇಶದ ಮೊದಲ ಭಾರತೀಯ ಸೇನಾ ಕಮಾಂಡರ್ ಆಗಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ರವರು ಅಧಿಕಾರ ಸ್ವೀಕರಿಸಿದರು, ಮತ್ತು ಈ ದಿನದ ಸವಿ ನೆನೆಪಿಗಾಗಿ ರಾಷ್ಟ್ರೀಯ ಸೇನಾ ದಿನವನ್ನು ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ ಭಾರತೀಯ ಸೇನೆಯು ವಿಶ್ವದಲ್ಲೇ 2ನೇ ಅತಿ ಹೆಚ್ಚು ಸೈನಿಕರನ್ನು ಹೊಂದಿರುವ ಸೇನಾಪಡೆಯಾಗಿದೆ.