Job Description: * ಮಹಾತ್ಮಾ ಗಾಂಧೀಜಿ ಅವರು 1915ರ ಜನೇವರಿ 9 ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ದಿನ, ಇದರ ನೆನೆಪಿಗೊಸ್ಕರ 2003 ರಲ್ಲಿ ಪ್ರವಾಸಿ ಭಾರತೀಯ ದಿನವನ್ನು ಆಚರಣೆ ಮಾಡಲು ಪ್ರಾರಂಭಿಸಲಾಗಿದೆ. ಇದು 18ನೇ ಪ್ರವಾಸಿ ಭಾರತೀಯ ದಿನ ಹಾಗು ಇದನ್ನು ಅನಿವಾಸಿ ಭಾರತೀಯರ(NRI) ದಿನ ಎಂದೂ ಕರೆಯುತ್ತಾರೆ. * ಈ ವರ್ಷ "ಆತ್ಮನಿರ್ಭರ ಭಾರತಕ್ಕೆ ಕೊಡುಗೆ" ಎಂಬ ಧ್ಯೇಯವಾಕ್ಯದಡಿಯಲ್ಲಿ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತಿದೆ. - NRI ಎಂದರೆ ಯಾರು ? * ಒಬ್ಬ ವ್ಯಕ್ತಿ ಕನಿಷ್ಠ ವರ್ಷದ 240 ದಿನಗಳು ಭಾರತದಲ್ಲಿ ವಾಸಿಸಬೇಕು, ಇಲ್ಲದಿದ್ದಲ್ಲಿ ಅಂತಹ ವ್ಯಕ್ತಿಗಳಿಗೆ NRI ಎಂದು ಗುರಿತಿಸಲಾಗುತ್ತದೆ. ಅನಿವಾಸಿ ಭಾರತೀಯ ಎಂದರೆ ಭಾರತೀಯರು ವಿದೇಶದಲ್ಲಿ ಕೆಲಸಕ್ಕಾಗಿ ಅಥವಾ ವಲಸೆ ಹೋಗಿದ್ದರೆ ಅಂಥವರನ್ನು ಅನಿವಾಸಿಗಳು ಎಂದು ಪರಿಗಣಿಸಲಾಗುತ್ತದೆ.