Job Description: * ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ನಾಲ್ಕು ಮಹಿಳಾ ಪೈಲಟ್ಗಳಾದ, ಕ್ಯಾಪ್ಟನ್ ಜೋಯಾ ಅಗರ್ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನು ಒಳಗೊಂಡ ತಂಡವು ಸ್ಯಾನ್ ಫ್ರಾನ್ಸಿಸ್ಕೊ ದಿಂದ ಬೆಂಗಳೂರಿನ ನಡುವಣ ವಿಶ್ವದ ಅತೀ ಹೆಚ್ಚು ದೂರದ ವಾಯು ವಿಮಾನ ಮಾರ್ಗದ ಸಂಚಾರವನ್ನು ಸಂಪೂರ್ಣವಾಗಿ ಈ ಮಹಿಳಾ ಪೈಲಟ್ಗಳು ನಿರ್ವಹಿದ್ದಾರೆ ಎಂದು ತಿಳಿಸಿದೆ. * ವಿಶ್ವದ ಅತಿ ದೀರ್ಘ ವಾಯು ಮಾರ್ಗವಾದ ಸ್ಯಾನ್ ಫ್ರಾನ್ಸಿಸ್ಕೊ ದಿಂದ ಬೆಂಗಳೂರಿನ ನಡುವಿನ ಮಾರ್ಗವು, ಅಟ್ಲಾಂಟಿಕ್ ಮೂಲಕ 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲು 17 ಗಂಟೆಗಳು ಬೇಕಾಯಿತು ಎಂದು ಕ್ಯಾಪ್ಟನ್ ಜೊಯಾ ಅಗರ್ವಾಲ್ ಮತ್ತು ಪೈಲಟ್ ಶಿವಾನಿ ಮನ್ಹಾಸ್ ಮಾಹಿತಿಯನ್ನು ನೀಡಿದರು.