Job Description: * ದೇಶಕ್ಕೆ ಅನ್ನ ಒದಗಿಸುವ ರೈತರಿಗಾಗಿ ಕರ್ನಾಟಕ ಸರ್ಕಾರದಿಂದ 'ಸ್ವಾಭಿಮಾನಿ ರೈತ' ಎಂಬ ಗುರುತಿನಚೀಟಿಯನ್ನು ನೀಡಲಾಗುತ್ತಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಉಸ್ತುವಾರಿ ಜಿಲ್ಲೆಯಾಗಿರುವ ಕೊಪ್ಪಳ ಜಿಲ್ಲೆಯಿಂದ ಜನೆವರಿ 9 ರಂದು ಗುರುತಿನಚೀಟಿ ನೀಡುವ ಕಾರ್ಯಕ್ರಮಕ್ಕೆ ಇತ್ತೀಚಿಗೆ ಚಾಲನೆ ನೀಡಿದರು. * ಕರ್ನಾಟಕ ರಾಜ್ಯವು ರೈತರಿಗೆ ಗುರುತಿನಚೀಟಿ ನೀಡುವ ಸಲುವಾಗಿ ರಾಜ್ಯವು ಇ-ಆಡಳಿತ ಇಲಾಖೆಯು ಎನ್.ಐ.ಸಿ ಅಡಿಯಲ್ಲಿ FRUITS ಸಾಫ್ಟ್ ವೇರ್ ಅನ್ನು ಅಭಿವೃದ್ಧಿ ಪಡಿಸಿದೆ, ಇದರಲ್ಲಿ ರಾಜ್ಯದ ರೈತರು ತಮ್ಮ ವಿವರಗಳನ್ನು ನೊಂದಾಯಿಸುವದರಿಂದ ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಚೀಟಿಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.