Job Description: * ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸಲು ದೆಹಲಿಯಲ್ಲಿನ ಸಚಿವ ಸಂಪುಟಕ್ಕೆ ಅನುಮೋದನೆ ನೀಡಿದರು. ಕೊಂಕಣಿ ಇಂಡೊ-ಆರ್ಯನ್ ಭಾಷೆಯಾಗಿದೆ, ಹಾಗೂ ಈ ಭಾಷೆಯನ್ನು ಹೆಚ್ಚಾಗಿ ಪಶ್ಚಿಮ ಕರಾವಳಿ ಪ್ರದೇಶದಲ್ಲಿನ ಜನರು ಬಳಸುತ್ತಿದ್ದಾರೆ. * ಪ್ರಸ್ತುತ ಕೊಂಕಣಿ ಭಾಷೆಯು ಗೋವಾ ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಹಾಗೂ ಇದನ್ನು ಪ್ರೋತ್ಸಾಹಿಸಲು ಮತ್ತು ಭಾಷೆಯನ್ನು ಇಷ್ಟಪಟ್ಟು ಮಾತನಾಡುವ ಜನರಿಗಾಗಿ ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಕೊಂಕಣಿ ಅಕಾಡೆಮಿಯನ್ನು ತೆರೆಯಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ತಮ್ಮ ಟ್ವೀಟರ ಖಾತೆ ಮೂಲಕ ಮಾಹಿತಿಯನ್ನು ತಿಳಿಸಿದ್ದಾರೆ.