Job Description: * ಸುಪ್ರೀಂ ಕೋರ್ಟ್ ನ ತೀರ್ಪಿನ ಅನ್ವಯ ಅಯೋಧ್ಯೆ ನಗರದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಕಾರಣ, ಅಯೋಧ್ಯೆಯನ್ನು ವಿಶ್ವದರ್ಜೆಯ ನಗರ ಮತ್ತು ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲು ಅಯೋಧ್ಯೆ ನಗರ ಪಾಲಿಕೆ ಹಾಗೂ ಐಐಎಂ- ಇಂದೋರ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. * ಪ್ರಸ್ತುತ ಇಂದೋರ್ ನಗರವು ಕೇಂದ್ರದ ಸ್ವಚ್ಛ ನಗರ ಎಂಬ ಪ್ರಶಸ್ತಿಗೆ ಭಾಜನವಾಗಿದೆ, ಇಂದೋರ್ ನಗರದಲ್ಲಿ ಅನುಸರಿಸಿದ ಅಭಿವೃದ್ಧಿ ಕ್ರಮಗಳನ್ನು ಪರಿಗಣಿಸಿ, ಐಐಎಂ - ಇಂದೋರ್ ನಿರ್ದೇಶಕ ಹಿಮಾಂಶು ರೈ ಹಾಗೂ ಅಯೋಧ್ಯೆ ನಗರ ಪಾಲಿಕೆಯ ಆಯುಕ್ತರಾದ ವಿಶಾಲ್ ಸಿಂಗ್ ರವರು ಅಯೋಧ್ಯೆಯನ್ನು ಅಭಿವೃದ್ಧಿಪಡಿಸಲು ಈ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿದ್ದಾರೆ.