Job Description: * ಭಾರತದ ಹೆಮ್ಮೆ ಇಸ್ರೋ ಸಂಸ್ಥೆಯು ಈ ವರ್ಷ ಚಂದ್ರಯಾನ-3 ಯೋಜನೆಯಡಿ ಚಂದ್ರನತ್ತ ನೌಕೆ ಹಾರಿಸಲು ನಿರ್ಧರಿಸಿದೆ. ಈ ಯೋಜನೆಯಡಿ ಲ್ಯಾಂಡರ್ ಮತ್ತು ರೋವರ್ಗಳನ್ನು ಒಳಗೊಂಡ ಬಾಹ್ಯಾಕಾಶ ನೌಕೆಯು ಚಂದ್ರನತ್ತ ಹಾರಲಿದೆ ಎಂದು ಇಸ್ರೋ ಮಾಹಿತಿಯನ್ನು ನೀಡಿದೆ. * ಭಾರತ ದೇಶದ ಮೊಟ್ಟಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ತಯಾರಿ ಬರದಿಂದ ಸಾಗಿದ್ದು, 3 ಭಾರತೀಯರನ್ನು ಆಯ್ಕೆ ಮಾಡಿ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ಈ ಗಗನಯಾನಿಗಳು 5-7 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರುತ್ತಾರೆ ಎಂದು ತಿಳಿದುಬಂದಿದೆ. * ಈ ಮುಂಚೆ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ದೇಶಗಳೆಂದರೆ ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಲಿನಲ್ಲಿ ಭಾರತವು ಶೀಘ್ರ ಸ್ಥಾನ ಪಡೆಯಲಿದೆ. * 2021ರ ಅಂತ್ಯಕ್ಕೆ ಈ ಗಗನ ಯಾನವನ್ನು ಲಾಂಚ್ ಮಾಡುವ ಸಾಧ್ಯತೆ ಇದೆ.