Job Description: * ಕೇರಳ ರಾಜ್ಯದ ತಿರುವನಂತಪುರ ಮಹಾನಗರ ಪಾಲಿಕೆ ಮೇಯರ್ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ರವರು ನೇಮಕಗೊಂಡಿದ್ದಾರೆ, ಪ್ರಸ್ತುತ ಇವರು ಬಿಎಸ್ಸಿ ಗಣಿತಶಾಸ್ತ್ರದ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ, ಹಾಗೂ ಅತಿ ಚಿಕ್ಕ ವಯಸ್ಸಿನಲ್ಲೇ ಮೇಯರ್ ಸ್ಥಾನ ಪಡೆದ ವ್ಯಕ್ತಿ ಇವರಾಗಿದ್ದಾರೆ. * ತಿರುವನಂತಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸಿಪಿಐ-ಎಂ ನೇತೃತ್ವದ ಎಲ್ಡಿಎಫ್, ಬಿಜೆಪಿ ಹಾಗೂ ಯುಡಿಎಫ್, ಪಕ್ಷೇತರರು ಸೇರಿ, ಒಟ್ಟು 100 ಸದಸ್ಯರು ಪಾಲಿಕೆಯ ಮೇಯರ್ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರು ಅದರಲ್ಲಿ ಸಿಪಿಐಎಂ ಸದಸ್ಯೆ ಆಗಿರುವ ಆರ್ಯ ರಾಜೇಂದ್ರನ್ ರವರು 54 ಮತಗಳನ್ನು ಪಡೆದು ಮೇಯರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.