Job Description: ಇತ್ತೀಚಿಗೆ ಚೀನಾ ದೇಶವು ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ, ರಿಮೋಟ್ ಸೆನ್ಸಿಂಗ್ ಉಪಗ್ರಹ, ಹಾಗೂ ಮೈಕ್ರೋ ಮತ್ತು ನ್ಯಾನೊ ತಂತ್ರಜ್ಞಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆಯಾದ ಕ್ಸಿನ್ಹುವಾ ಮಾಹಿತಿಯನ್ನು ನೀಡಿದೆ. ಈ ಉಪಗ್ರಹಗಳಿಂದ ಭೂ ಸಂಪನ್ಮೂಲಗಳ ಸಮೀಕ್ಷೆ ಮತ್ತು ಬೆಳೆ ಇಳುವರಿ ಅಂದಾಜು, ವೈಜ್ಞಾನಿಕ ಪ್ರಯೋಗಗಳು ಜೊತೆಗೆ ವಿಪತ್ತು ತಡೆಗಟ್ಟುವಿಕೆ ದೃಷ್ಟಿಯಿಂದ ದೇಶವನ್ನು ಕಾಪಾಡಲು ಈ ಉಪಗ್ರಹವು ಸಹಕರಿಸಲಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.