Job Description: ಭಾರತದ ರೂಪಾಯಿ ಡಾಲರ್ ಎದುರು ಚೇತರಿಕೆ ಕಾಣುವಲ್ಲಿ ವಿಫಲವಾಗಿದ್ದು, ಏಷ್ಯಾದಲ್ಲಿಯೇ ಅತ್ಯಂತ ಕಳಪೆ ಮಟ್ಟದ ನಿರ್ವಹಣೆ ತೋರಿದ ಕರೆನ್ಸಿಗಳಲ್ಲಿ ಇದು ಒಂದಾಗಿದೆ. ಪ್ರಸ್ತುತ ಈ ವರ್ಷದಲ್ಲಿ ಅಮೆರಿಕನ್ ಡಾಲರ್ ಎದುರು ಶೇಕಡಾ 3.28ರಷ್ಟು ಕುಸಿತವನ್ನು ಭಾರತದ ರೂಪಾಯಿ ಕಂಡಿದೆ. ದೇಶ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗರಿಷ್ಠ ಮಟ್ಟದ ನಿಬಂಧನೆಗಳನ್ನು ಹೇರಿರುವ ಕಾರಣದಿಂದಾಗಿ ಭಾರತದ ರೂಪಾಯಿ ಅಮೆರಿಕನ್ ಡಾಲರ್ ಮತ್ತು ವಿದೇಶಿ ಕರೆನ್ಸಿಗಳ ಪ್ರಯೋಜನ ಪಡೆಯುವಲ್ಲಿ ಕುಸಿತವನ್ನು ಕಂಡು ಅತ್ಯಂತ ಕೆಟ್ಟ ನಿರ್ವಹಣೆ ತೋರಿರುವುದಾಗಿ ವರದಿಯಾಗಿದೆ.