Job Description: * ಇತ್ತೀಚಿಗೆ ಕೇಂದ್ರ ಅರಣ್ಯ ಮತ್ತು ಹವಾಮಾನ ಇಲಾಖಾಯ ಸಚಿವಾಲಯವು 2018ರ ಚಿರತೆಗಳ ವರದಿಯನ್ನು ಬಿಡುಗಡೆಗೊಳಿಸಿದ್ದು, ಈ ವರದಿಯಲ್ಲಿ ಭಾರತದಲ್ಲಿನ ಚಿರತೆಗಳ ಜನಸಂಖ್ಯೆ 60% ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. * 2014 ರ ವರದಿಯ ಪ್ರಕಾರ ಭಾರತದಲ್ಲಿ 7,910 ಚಿರತೆಗಳಿದ್ದವು, ಪ್ರಸ್ತುತ 2018 ವರದಿ ಪ್ರಕಾರ ಭಾರತದಲ್ಲಿ 12,852 ಚಿರತೆಗಳಿವೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಸುಮಾರು 3,387 ಚಿರತೆಗಳು ಕರ್ನಾಟಕ, ತಮಿಳುನಾಡು, ಗೋವಾ ಮತ್ತು ಕೇರಳ ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. * ಸುಮಾರು 1,253 ಕ್ಕೂ ಹೆಚ್ಚು ಚಿರತೆಗಳು ಗಂಗಾ ಬಯಲು ಮತ್ತು ಶಿವಾಲಿಕ್ನಲ್ಲಿ ಕಾಣಿಸಿಕೊಂಡಿವೆ. * ವನ್ಯಜೀವಿಗಳ ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪ್ ಭಾರತದ ಹುಲಿ ಸಮೀಕ್ಷೆಗಾಗಿ ಗಿನ್ನೆಸ್ ವಿಶ್ವ ದಾಖಲೆಗೆ ಪಡೆದಿದೆ. * ಚಿರತೆಗಳನ್ನು 1972 ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅಡಿಯಲ್ಲಿ ರಕ್ಷಿಸಲಾಗಿವೆ.