Job Description: ಕರ್ನಾಟಕದ ಇಂದಿರಾ ಕ್ಯಾಂಟೀನ್ ಹಾಗು ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ದೆಹಲಿಯ ಗಾಂಧಿಗರದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರವರು 1 ರೂ.ಗೆ ಊಟ ನೀಡುವ, 'ಜನ್ ರಸೋಯಿ ಕ್ಯಾಂಟೀನ್' ಗೆ ಚಾಲನೆ ನೀಡಿದರು. ಕಡು ಬಡವರು ಹೊತ್ತಿನ ಊಟಕ್ಕೂ ಅಲೆದಾಡುವದನ್ನು ಕಂಡು ಉತ್ತಮ ಊಟ ನೀಡುವ 'ಜನ್ ರಸೋಯಿ' ಎಂಬ ಕ್ಯಾಂಟೀನ್ ಪ್ರಾರಂಭ ಮಾಡಿದ್ದಾರೆ. ಈ ಕ್ಯಾಂಟೀನ್ನಲ್ಲಿ ಏಕ ಕಾಲಕ್ಕೆ 100 ಮಂದಿಗ ಊಟ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಬಡವರಿಗೆ ಹಾಗೂ ನಿರಾಶ್ರಿತರಿಗೆ ತುಂಬಾ ಅನುಕೂಲವಾಗಲಿದೆ.