Job Description: ಇತ್ತೀಚಿಗೆ MRSAM ಎಂಬ ವಾಯು ಕ್ಷಿಪಣಿ ಯನ್ನು ಒಡಿಶಾದ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷೇ ಮಾಡಲಾಯಿತು. ಈ ವಾಯು ಕ್ಷಿಪಣಿ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಜೊತೆಗೆ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಸಿದ್ಧಪಡಿಸಿವೆ. ಈ ಕ್ಷಿಪಣಿಯು 276 ಕಿಲೋ ಗ್ರಾಂ ತೂಕ ಮತ್ತು 4.5 ಮೀಟರ್ ಉದ್ದವನ್ನು ಹೊಂದಿದ್ದು, ಇದರಿಂದ ರೇಡಾರ್ ಮತ್ತು ಮೊಬೈಲ್ ಲಾಂಚರ್ ವ್ಯವಸ್ಥೆಗಳನ್ನು ಪತ್ತೆ ಮಾಡುತ್ತದೆ, ಹಾಗೂ ಕ್ಷಿಪಣಿಗಳನ್ನು ಉಡಾಯಿಸಲು ಇದು ಸಮರ್ಥವಾಗಿದೆ ಎಂದು ಮಾಹಿತಿಯನ್ನು ನೀಡಿದೆ. ಈ ಕ್ಷಿಪಣಿಯು 70 ಕಿ.ಮೀ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಅನೇಕ ಗುರಿಗಳನ್ನು ಹೊಡೆದುರಿಳಿಸಬಲ್ಲುದು ಜೊತೆಗೆ ಉತ್ತಮ ಗುಣಮಟ್ಟದ ವಾಯು ಪರಿಸ್ಥಿತಿ ಚಿತ್ರನವನ್ನು ನೀಡಬಲ್ಲುದು.