Job Description: ಕ್ಯಾಟೊ ಸಂಸ್ಥೆ ಮತ್ತು ಫ್ರೇಸರ್ ಸಂಸ್ಥೆಯು ಇತ್ತೀಚಿಗೆ 2020ರ ಮಾನವ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಕಟಣೆ ಮಾಡಿದ್ದು, ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 2020ರ ಸಾಲಿನಲ್ಲಿ 111ನೇ ಸ್ಥಾನಪಡೆದಿದೆ, ಈ ಮೊದಲು ಭಾರತವು 2019 ರಲ್ಲಿ 94ನೇ ಸ್ಥಾನದಲ್ಲಿತ್ತು, ಮಾನವ ಸ್ವಾತಂತ್ರ್ಯ ಸೂಚ್ಯಂಕವು ವೈಯಕ್ತಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ 79 ಬೇರೆ ಬೇರೆ ರೀತಿಯ ಸೂಚಕಗಳನ್ನು ಒಳಗೊಂಡಿರುತ್ತದೆ ಭಾರತವು ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಚೀನಾ ಮತ್ತು ಬಾಂಗ್ಲಾದೇಶಕ್ಕಿಂತ ಮುಂದೆ ಇದೆ. ಚೀನಾ ಮತ್ತು ಬಾಂಗ್ಲಾದೇಶ ಕ್ರಮವಾಗಿ 129 ಮತ್ತು 139 ನೇ ಸ್ಥಾನದಲ್ಲಿವೆ. ಇನ್ನು ನ್ಯೂಜಿಲೆಂಡ್ ಮೊದಲನೇ ಸ್ಥಾನ, ಸ್ವಿಟ್ಜರ್ಲೆಂಡ್ ಎರಡನೇ ಸ್ಥಾನ ಹಾಗೂ ಹಾಂಗ್ ಕಾಂಗ್ ಮೂರನೇ ಸ್ಥಾನಗಳನ್ನು ಪಡೆದಿವೆ.