Job Description: ಭಾರತದ ಹಾಗೂ ರಷ್ಯಾ ಜೊತೆಗಿನ ರಕ್ಷಣಾ ವ್ಯವಹಾರ ಸಂಬಂಧ ಉತ್ತಮವಾಗಿ ಸಾಗುತ್ತಿದೆ ಜೊತೆಗೆ ಎಸ್-400 ಕ್ಷಿಪಣಿ ಸೇರಿದಂತೆ ರಕ್ಷಣಾ ಸಾಮಗ್ರಿಗಳ ಪೂರೈಕೆ ಭಾರತದೊಂದಿಗೆ ಸುಗಮವಾಗಿ ನಡೆಯುತ್ತಿದೆ ಎಂದು ಇತ್ತೀಚಿಗೆ ರಷ್ಯಾ ಮಾಹಿತಿಯನ್ನು ನೀಡಿದೆ. ರಷ್ಯಾ ರಾಯಭಾರಿ ನಿಕೋಲಾಯ್ ಕುಡ್ಶೆವ್ ರವರು ಇತ್ತೀಚಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಜೊತೆಗೆ ಯಾವುದೇ ದೇಶದ ಮೇಲೆ ನಿರ್ಬಂಧಗಳನ್ನು ಹೇರುವುದನ್ನು ರಷ್ಯಾ ಒಪ್ಪಿಕೊಳ್ಳುವುದಿಲ್ಲ ಹಾಗೂ 2021ರಂದು ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾದಲ್ಲಿ ರಷ್ಯಾ ದೇಶದಿಂದ ಎಸ್ಯು-57, ಎಸ್ಯು-35, ಮಿಗ್-35 ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ಪ್ರದರ್ಶಿಸಲಾಗುವುದು ಎಂದು ರಷ್ಯಾ ರಾಯಭಾರಿ ನಿಕೋಲಾಯ್ ಕುಡ್ಶೆವ್ ಇದೆ ವೇಳೆ ಹೇಳಿದ್ದಾರೆ.