Job Description: ದೇಶದ ಮೊದಲ ಗಾಜಿನ ಸೇತುವೆಯನ್ನು ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಚ್ 2021ರ ಹೊತ್ತಿಗೆ ಈ ಗಾಜಿನ ಸೇತುವೆಯನ್ನು ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳುವ ಸಾಧ್ಯತೆಯಿದ್ದು, ಜೊತೆಗೆ ಈ ಪ್ರದೇಶದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ನಿರ್ಮಿಸುವ ಗುರಿಯನ್ನು ಬಿಹಾರದ ಅರಣ್ಯ ಇಲಾಖೆ ಹೊಂದಿದೆ. ಬಿಹಾರ ರಾಜ್ಯದಲ್ಲಿರುವ ಈ ಗಾಜಿನ ಸೇತುವೆ 200 ಅಡಿ ಎತ್ತರ ಮತ್ತು 85 ಅಡಿ ಉದ್ದವನ್ನು ಹಾಗೂ 6 ಅಡಿ ಅಗಲವನ್ನು ಹೊಂದಿದ್ದು, ಈ ಸೇತುವೆ ಮೇಲೆ 40 ಮಂದಿ ಏಕ ಕಾಲಕ್ಕೆ ಸುತ್ತಾಡಬಹುದಾಗಿದೆ ಎಂದು ಬಿಹಾರದ ಅರಣ್ಯ ಇಲಾಖೆ ಮಾಹಿತಿಯನ್ನು ನೀಡಿದೆ.