Job Description: * ಭಾರತ ದೇಶದ ಮೊದಲನೇ ಬುಲೆಟ್ ರೈಲು ಮುಂಬೈ-ಅಹ್ಮದಾಬಾದ್ ಮಾರ್ಗದಲ್ಲಿ ನಿರ್ಮಾಣವಾಗುತ್ತಿದ್ದು, ಈ ಬುಲೆಟ್ ರೈಲಿನಲ್ಲಿ ಸುಧಾರಿತ ಬೋಗಿ-ಎಂಜಿನ್ ಅಳವಡಿಸಲಾಗುವದು ಎಂದು ಜಪಾನ್ ರಾಯಭಾರ ಕಚೇರಿ ತಿಳಿಸಿದೆ. * ಜಪಾನ್ E5 ಸೀರೀಸ್ ಬುಲೆಟ್ ಟ್ರೈನ್ ಗಂ.320 ಕಿ.ಮೀ ವೇಗದಲ್ಲಿ ಗಂಟೆಗೆ ಗರಿಷ್ಠ 350 ಕಿ.ಮೀ ವೇಗದಲ್ಲಿ ಓಡಲಿದೆ ಹಾಗೂ ಈ ರೈಲಿನ ಮೊದಲ ಅಧಿಕೃತ ಫೋಟೋಗವನ್ನು ಜಪಾನ್ ಬಿಡುಗಡೆಗೊಳಿಸಿದೆ. * 508 ಕಿ.ಮೀ ಉದ್ದದ ರೈಲು ಯೋಜನೆ ಇದಾಗಿದ್ದು, 2023ರ ವೇಳೆಗೆ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಈ ಬುಲೆಟ್ ರೈಲು ಮುಂಬೈ ಮತ್ತು ಅಹಮದಾಬಾದ್ ನಡುವಿನ ಸಂಚರಿಸಲಿದೆ.