Job Description: 'ಆತ್ಮ ನಿರ್ಭರ ಭಾರತ್ ರೊಜ್ ಗಾರ್ ಯೋಜನೆ'ಗಾಗಿ ಕೇಂದ್ರ ಸರ್ಕಾರವು ಹಣವನ್ನು ಹಂಚಿಕೆ ಮಾಡಿದ್ದು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಈ ಯೋಜನೆ ಅನುಕೂಲಕರವಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಗಾಗಿ 1,584 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ. * ಈ ಯೋಜನೆಯ ಮೂಲಕ 2,374 ಗ್ರಾಮಗಳಿಗೆ ಮೊಬೈಲ್ ವ್ಯಾಪ್ತಿ ಲಭಿಸಲಿದೆ, ಈ ಯೋಜನೆಯನ್ನು 2022 ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿರುವದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. * ಆತ್ಮನಿರ್ಭರ ಭಾರತ್ ರೋಜಗಾರ್ ಯೋಜನೆಯಿಂದ ಹೊಸದಾಗಿ ಉದ್ಯೋಗ ನೀಡುವ ಸಂಸ್ಥೆಗಳು, ಕೈಗಾರಿಕೆಗಳ ಪರವಾಗಿ ಉದ್ಯೋಗಿ, ಸಂಸ್ಥೆ ಪಾಲನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸಂತೋಷ್ ಗಂಗ್ವಾರ್ ತಿಳಿಸಿದರು .