Job Description: ಟಿಬೆಟ್ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ (ಅಣೆಕಟ್ಟು) ಜಲವಿದ್ಯುತ್ ಯೋಜನೆ ನಿರ್ಮಿಸಲು ಚೀನಾ ರಾಷ್ಟ್ರವು ಯೋಜನೆ ರೂಪಿಸಿದೆ. ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಮುಂದಿನ ವರ್ಷ(2021) ಅನುಷ್ಠಾನಕ್ಕೆ ಬರಲಿದ್ದು, ಈ ಯೋಜನೆಯ ಭಾಗವಾಗಿ ಚೀನಾ ಟಿಬೆಟ್ ನಲ್ಲಿ ಆಣೆಕಟ್ಟು ನಿರ್ಮಿಸಲು ಉದ್ದೇಶಿಸಿರುವುದಾಗಿ ಚೀನಾದ ವಿದ್ಯುತ್ ಯೋಜನೆ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಯಾನ್ ಝಿಯಾಂಗ್ ಮಾಹಿತಿ ನೀಡಿದ್ದಾರೆ. ಚೀನಾದ ಈ ಯೋಜನೆಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶದ ಅನೇಕ ನದಿ ತೀರದ ರಾಜ್ಯಗಳಿಗೆ ಇದು ಅಪಾಯವುಂಟುಮಾಡುವ ಸಾಧ್ಯತೆ ಇದೆ. ಆದರೆ ನೆರೆಯ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆ ರೂಪಿಸುತ್ತಿರುವುದಾಗಿ ಹೇಳಿರುವ ಚೀನಾ ಹೇಳಿಕೆ ನೀಡಿದೆ. # ಬ್ರಹ್ಮಪುತ್ರ ನದಿಯನ್ನು ಚೀನಾದಲ್ಲಿ ಯರ್ಲುಂಗ್ ಝಾಂಗ್ಬೊ ಹೆಸರಿನಿಂದ ಕರೆಯುತ್ತಾರೆ.