Job Description: ಇತ್ತೀಚಿಗೆ ರಕ್ಷಣೆ ಕುರಿತಂತೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವು ಭಾರತ, ಮಾಲ್ಡೀವ್ಸ್ ಗಳ ಸಹಯೋಗದಲ್ಲಿ ನಾಲ್ಕನೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ತ್ರಿಪಕ್ಷೀಯ ಮಾತುಕತೆ ಸಭೆಯನ್ನು ಆಯೋಜಿಸಿತ್ತು. ಈ ಸಭೆ ಇಂದ ಕಡಲ ತೀರದ ರಕ್ಷಣೆ, ಪರಿಸರ ಸಂರಕ್ಷಣೆ, ಸಮುದ್ರದ ಮೂಲಕ ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ತಡೆಗಟ್ಟುವುದು ಸೇರಿದಂತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಒಳನಾಡು, ಕಡಲ ತೀರದ ಸುರಕ್ಷತೆ ನಡುವಣ ತ್ರಿಪಕ್ಷೀಯ ಮಾತುಕತೆಯ ಭಾಗವಾಗಿ ದೋವಲ್ ಮತ್ತು ಮಾಲ್ಡೀವ್ಸ್ ನ ದಿದಿ ಅವರ ನಡುವೆ ಸಂವಾದ ನಡೆಯಿತು. ಈ ಸಂವಾದದಲ್ಲಿ ಚೀನಾ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಹವಣಿಸುತ್ತಿರುವ ಸಂದರ್ಭದಲ್ಲೇ ಮಾಲ್ಡೀವ್ಸ್ ದ್ವೀಪ ರಾಷ್ಟ್ರದೊಂದಿಗೆ ಮಹತ್ವದ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದು ಉತ್ತಮ ಬೆಳವಣಿಗೆಯಾಗಿದೆ. * ಈ ಸಭೆಯು ಕಳೆದ ಬಾರಿ 2014ರಲ್ಲಿ ಸಭೆಯು ನವದೆಹಲಿಯಲ್ಲಿ ನಡೆದಿತ್ತು, ಆರು ವರ್ಷಗಳ ನಂತರ ಈ ಸಭೆ ನಡೆಯುತ್ತಿದೆ.