Job Description: ನೋಯ್ಡಾ : ಖ್ಯಾತ ಮೊಬೈಲ್ ಹಾಗೂ ಇಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಸ್ಯಾಮ್ಸಂಗ್ ಉತ್ತರ ಪ್ರದೇಶದ ನೋಯ್ದಾದಲ್ಲಿ ಸ್ಥಾಪಿಸಿರುವ ತನ್ನ ಉತ್ಪಾದನಾ ಕೇಂದ್ರದಲ್ಲಿ ಸುಮಾರು 5,000 ಕೋಟಿ ರೂಪಾಯಿ ಹೂಡಿಕೆ ಮಾಡಲಿರುವುದಾಗಿ ತಿಳಿದುಬಂದಿದೆ. ಕಂಪನಿಯ ಸ್ಮಾರ್ಟ್ ಫೋನ್ ಡಿಸ್ ಪ್ಲೇ ಉತ್ಪಾದನಾ ಕೇಂದ್ರವನ್ನು ಜನವರಿ-ಫೆಬ್ರವರಿ 2021 ರ ವೇಳೆಗೆ ಸಿದ್ಧಪಡಿಸಲಿದ್ದು, ಮತ್ತು ಏಪ್ರಿಲ್ 2021 ರ ವೇಳೆಗೆ ವಾಣಿಜ್ಯ ಉತ್ಪಾದನೆಯನ್ನು ಸಾಧಿಸುವ ನಿರೀಕ್ಷೆಯಿದೆ. ಘಟಕವು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದರೆ, ಸ್ಯಾಮ್ಸಂಗ್ನ ಸ್ಮಾರ್ಟ್ಫೋನ್ ಡಿಸ್ಪ್ಲೇ ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಮೂರನೇ ರಾಷ್ಟ್ರವಾಗಿ ಭಾರತ ಸ್ಥಾನ ಪಡೆಯಲಿದೆ. * ಸ್ಯಾಮ್ಸಂಗ್ ಸಂಸ್ಥೆಯ ಈ ಹೂಡಿಕೆಯಿಂದಾಗಿ ಭಾರತದಲ್ಲಿ ಸುಮಾರು 1,500 ಹೆಚ್ಚುವರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.