Job Description: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಹಲವು ವರ್ಷಗಳಿಂದ ವಿರಾಜಮಾನರಾಗಿದ್ದ ಸಾಫ್ಟ್ ವೇರ್ ಉದ್ಯಮದ ದೈತ್ಯ ಬಿಲ್ ಗೇಟ್ಸ್ ಅವರನ್ನು ಕೆಳಗಿಳಿಸಿ ಟೆಲ್ಸಾ ಕಂಪನಿಯ ಮುಖ್ಯಸ್ಥ ಇಲಾನ್ ಮಸ್ಕ್ ಮೊದಲಸ್ಥಾನಕ್ಕೇರಿದ್ದಾರೆ ಹಾಗೂ ಬಿಲ್ ಗೇಟ್ಸ್ ಎರಡನೇ ಸ್ಥಾನಕ್ಕಿಳಿದಿದ್ದಾರೆ. ಟೆಲ್ಸಾ ಸಹ ಸಂಸ್ಥಾಪಕ ಇಲಾನ್ ಮಸ್ಕ್ ಅವರ ವಾರ್ಷಿಕ ಆದಾಯ ಇತ್ತೀಚಿಗೆ 100.3 ಶತಕೋಟಿ ಡಾಲರ್ ಏರಿಕೆ ಕಂಡಿದ್ದು, ಇದು ಬಿಲ್ ಗೇಟ್ಸ್ ಅವರ ಆದಾಯಕ್ಕಿಂತ 7.2 ಶತಕೋಟಿ ಡಾಲರ್ ಹೆಚ್ಚಿದ್ದು, ಈ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.