Job Description: ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರವು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಹಾಗೂ ವಿಜ್ಞಾನ -ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರತಿ ವರ್ಷ ಆಯೋಜಿಸುತ್ತಿರುವ "ತಂತ್ರಜ್ಞಾನ ಶೃಂಗಸಭೆ" ಯನ್ನು ಇದೆ ನವೆಂಬರ್ 19 ರಿಂದ 21ರ ವರೆಗೆ ಆಯೋಜಿಸಲಾಗಿದೆ. ಕೋರೋಣ ಸೋಂಕಿನ ಕಾರಣ ಇದೇ ಮೊದಲ ಬಾರಿಗೆ ಈ ಶೃಂಗಸಭೆಯನ್ನು ವರ್ಚುವಲ್ ಸ್ವರೂಪ(ವಿಡಿಯೋ ಕಾನ್ಫರೆನ್ಸ್) ಮೂಲಕ ನಡೆಸಲಿದೆ. * ಈ ಶೃಂಗಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಲಿದ್ದಾರೆ. * ಶೃಂಗಸಭೆಯಲ್ಲಿ, 80 ಜಾಗತಿಕ ಪ್ರತಿಭಾನ್ವಿತರು ಸೇರಿ 250ಕ್ಕೂ ಹೆಚ್ಚು ವಿಷಯ ಪರಿಣಿತರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.