Job Description: ನವದೆಹಲಿ : ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯ ರಾಷ್ಟ್ರಗಳು ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದ ಬಂಗಾಳಕೊಲ್ಲಿಯ ವಿಶಾಖಪಟ್ಟಣ ಕರಾವಳಿ ಪ್ರದೇಶದಲ್ಲಿ ಬೃಹತ್ ಜಂಟಿ ನೌಕಾಪಡೆ ಕವಾಯತನ್ನು ಆರಂಭಿಸಿದ್ದು ಈ ಮೂಲಕ ಹಿಂದೂ ಮಹಾಸಾಗರ – ಪೆಸಿಫಿಕ್ ಪ್ರದೇಶದಲ್ಲಿ ಚೀನಾ ರಾಷ್ಟ್ರದ ಪ್ರಾಬಲ್ಯವನ್ನು ನಿಗ್ರಹಿಸುವ ಮುಖ್ಯ ಉದ್ದೇಶವನ್ನು ಉಭಯ ರಾಷ್ಟ್ರಗಳು ಹೊಂದಿವೆ. * 1992 ರಲ್ಲಿ ಅಮೆರಿಕ ಹಾಗೂ ಭಾರತ ರಾಷ್ಟ್ರಗಳು ದ್ವಿಪಕ್ಷೀಯ ಸೇನಾ ಸಮರಾಭ್ಯಾಸದ ಭಾಗವಾಗಿ ಈ ‘ಮಲಬಾರ್’ ನೌಕಾ ಸಮರಾಭ್ಯಾಸವನ್ನು ಆರಂಭಿಸಿದವು. * 2015ರಲ್ಲಿ ಜಪಾನ್ ಈ ಸಮರಾಭ್ಯಾಸಕ್ಕೆ ಸೇರ್ಪಡೆಗೊಂಡಿತು. * ಪ್ರಸ್ತುತ ವರ್ಷದಿಂದ ‘ಮಲಬಾರ್’ ಕವಾಯತಿನಲ್ಲಿ ಆಸ್ಟ್ರೇಲಿಯ ರಾಷ್ಟ್ರವು ಕೂಡ ಹೊಸದಾಗಿ ಸಂಘಟನೆಯನ್ನು ಸೇರಿಕೊಂಡಿದೆ. * ಎರಡನೇ ಹಂತದ ಕವಾಯತು ನ.17 ರಿಂದ 20ರವರೆಗೆ ಅರಬ್ಬಿ ಸಮುದ್ರದಲ್ಲಿ ನಡೆಯಲಿದೆ.