Job Description: ಮೈಸೂರು: ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚಿಗೆ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ಥಾನ ಗಿಟ್ಟಿಸಿದ್ದಾರೆ. ಸಾವಯವ ರಾಸಾಯನ ವಿಜ್ಞಾನ ಕ್ಷೇತ್ರದಲ್ಲಿನ ಅವರ ಸಾಧನೆ ಗುರುತಿಸಿ ಇವರಿಗೆ ಪಟ್ಟಿಯಲ್ಲಿ 2181 ನೇ ಸ್ಥಾನವನ್ನು ನೀಡಲಾಗಿದೆ, ಇವರು 500 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಹಾಗೂ 11 ವಿವಿಧ ಸಂಶೋಧನಾ ಪೇಟೆಂಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿನ ವಿಜ್ಞಾನಿಗಳ ಪೈಕಿ ಭಾರತೀಯ ವಿಜ್ಞಾನಿಗಳ ಪಾಲು ಶೇಕಡಾ 02 ರಷ್ಟಿದ್ದು, ಭಾರತೀಯರ ಹೆಮ್ಮೆಯಾಗಿದೆ.