Job Description: ಬೆಂಗಳೂರು: ಜಾಗತಿಕವಾಗಿ ವ್ಯಾಪಿಸಿದ ಕೋರೋಣ ಸೋಂಕಿನ ಕಾರಣ ಬಹುತೇಕ ಎಲ್ಲ ರಾಷ್ಟ್ರಗಳ ಬಾಹ್ಯಾಕಾಶ ಯೋಜನೆಗಳು ನಿಧಾನಗೊಂಡಿದ್ದವು. ಅದೇ ರೀತಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಕೂಡ ಸತತ 11 ತಿಂಗಳ ಅವಧಿಯಲ್ಲಿ ಯಾವುದೇ ಉಪಗ್ರಹ ಉಡಾವಣೆ ಕೈಗೊಂಡಿಲ್ಲ, 2019ರ ಡಿಸೆಂಬರ್ 11 ರಂದು ಇಸ್ರೊ ನಡೆಸಿದ ಉಪಗ್ರಹ ಉಡಾವಣೆಯೇ ಕೊನೆಯದಾಗಿತ್ತು. * ಇದೀಗ ಸುಮಾರು 11 ತಿಂಗಳ ಬಳಿಕ ಇದೇ ನವೆಂಬರ್ 7 ರಂದು PSLV ಉಡಾವಣಾ ವಾಹನ ಮೂಲಕ ಇಒಎಸ್–01 ಸೇರಿ ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆಗೆ ಇಸ್ರೊ ಸಿದ್ಧತೆ ನಡೆಸಿದೆ. * ಇಒಎಸ್ ಉಪಗ್ರಹ 01 : ಭೂವೀಕ್ಷಣಾ ಉಪಗ್ರಹ 01 (ಇಒಎಸ್) ಕೃಷಿ, ಅರಣ್ಯ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಯ ಉದ್ದೇಶಕ್ಕೆ ನೆರವಾಗಲಿದ್ದು, ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾಯಿಸಲು ಯೋಜಿಸಲಾಗಿದೆ.