Job Description: ಸ್ಕಾಟಿಷ್ ನಟರಾದ ಹಾಗೂ ಜೇಮ್ಸ್ ಬಾಂಡ್ ಪಾತ್ರವನ್ನು ದೊಡ್ಡ ಪರದೆಗೆ ತಂದ ಮೊದಲ ನಟ 'ಸೀನ್ ಕಾನೆರಿ' ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದುವರೆಗೂ ಹಾಲಿವುಡ್ ನಲ್ಲಿ ಸಿನಿಮಾ ರಂಗದಲ್ಲಿ ಸುಮಾರು 25 ಕ್ಕೂ ಅಧಿಕ ಬಾಂಡ್ ಹೆಸರಿನ ಸಿನಿಮಾಗಳು ತೆರೆಕಂಡಿದ್ದು, ಇವುಗಳ ಪೈಕಿ ಮೊದಲ 7 ಬಾಂಡ್ ಚಿತ್ರಗಳಲ್ಲಿ ಸೀನ್ ಕಾನೆರಿ ಬಣ್ಣ ಹಚ್ಚಿದ್ದರು. * ಇವರ ಪೂರ್ಣ ಹೆಸರು ಸರ್ ಥಾಮಸ್ ಸೀನ್ ಕಾನೆರಿ. 1930 ಆಗಸ್ಟ್ 25 ರಂದು ಫೌಂಟೇನ್ ಬ್ರಿಡ್ಜ್ ನಲ್ಲಿ ಜನನ. * ನಟಿಸಿದ ಚಿತ್ರಗಳು : ಡಾ. ನಂ(1962), ಫ್ರಂ ರಷಿಯಾ ವಿತ್ ಲವ್(1963), ಗೋಲ್ಡ್ ಫಿಂಗರ್(1964), ಥಂಡರ್ ಬಾಲ್(1965), ಯು ಕ್ಯಾನ್ ಓನ್ಲಿ ವಿವ್ ಟ್ವೈಸ್(1967), ಡೈಮಂಡ್ಸ್ ಆರ್ ಫಾರೆವರ್(1971), ನೆವರ್ ಸೇ ನೆವರ್ ಅಗೇನ್(1983) * ಇವರು ಆಸ್ಕರ್ ಸೇರಿ, ಮೂರು ಬಾರಿ ಗೋಲ್ಡನ್ ಗ್ಲೋಬ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ.