Job Description: ಹೊಸದಿಲ್ಲಿ: ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗಳಿಗೆ ಸ್ಪರ್ದಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಶೇ.10ರಷ್ಟು ಹೆಚ್ಚಿಸಿ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು, ಈ ನಿಯಮವು ಶೀಘ್ರದಲ್ಲೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗಳಿಗೂ ಅನ್ವಯಿಸಲಿದೆ. ಚುನಾವಣಾ ಪ್ರಚಾರದಲ್ಲಿ ಕೊರೊನಾ ಸೋಂಕಿನ ಕುರಿತು ಜಾಗೃತಿಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿರುವದರಿಂದ ಪ್ರಚಾರದ ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುವದರಿಂದ ವೆಚ್ಚದ ಮಿತಿಯನ್ನು ಶೇ.10ರಷ್ಟು ಹೆಚ್ಚಿಸಲು ಚುನಾವಣಾ ಆಯೋಗವು ಶಿಫಾರಸು ಮಾಡಿದೆ. ನೂತನ ಶಿಫಾರಸ್ಸಿನಂತೆ * ಲೋಕಸಭಾ ಚುನಾವಣೆಗೆ ಗರಿಷ್ಠ 77 ಲಕ್ಷ ರೂ. (ಮೊದಲು 70 ಲಕ್ಷ ರೂ.), * ವಿಧಾನಸಭೆ ಚುನಾವಣೆಗೆ ಗರಿಷ್ಠ 30.8 ಲಕ್ಷ ರೂ. (28 ಲಕ್ಷ ರೂ.) ಗಳನ್ನೂ ಅಭ್ಯರ್ಥಿಗಳಿಗೆ ಖರ್ಚು ಮಾಡಲು ಅವಕಾಶ ನೀಡಲಾಗಿದೆ.