Job Description: ನವದೆಹಲಿ: ಶೀಘ್ರದಲ್ಲೇ ಭಾರತ ಮತ್ತು ಅಮೆರಿಕ ರಾಷ್ಟ್ರಗಳ ನಡುವೆ ಎರಡನೇ 2+2 ಸಚಿವರುಗಳ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದ್ದು, ಈ ಸಭೆಯಲ್ಲಿ ಭದ್ರತೆ, ರಕ್ಷಣೆ, ವಿದೇಶಾಂಗ ನೀತಿ ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಕೆಲ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕುವ ಸಾಧ್ಯತೆ ಇದೆ. ಅಮೆರಿಕ ರಕ್ಷಣಾ ಸಚಿವ ಮಾರ್ಕ್ ಎಕ್ಸ್ಪರ್ವ್ ಹಾಗೂ ವಿದೇಶಾಂಗ ಸಚಿವ ಮೈಕ್ ಪುಂಪಿಯೊ ಶೀಘ್ರದಲ್ಲಿ ಭಾರತಕ್ಕೆ ಭೇಟಿ ನೀಡಿ, ರಾಜನಾಥ್ ಸಿಂಗ್ ಮತ್ತು ಎಸ್.ಜೈಶಂಕರ್ ಅವರೊಂದಿಗೆ 2+2 ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಡೋ ಫೆಸಿಫಿಕ್ ಪ್ರಾಂತ್ಯದಲ್ಲಿ ಚೀನಾದ ಪ್ರಾಭಲ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ-ಭಾರತ ನಡುವಣ ಚರ್ಚೆ ತೀವ್ರ ಮಹತ್ವ ಪಡೆದುಕೊಂಡಿದೆ.